ಹುಬ್ಬಳ್ಳಿ: ನಗರದ ಕನಕದಾಸ ಶಿಕ್ಷಣ ಸಮಿತಿಯ ಸ್ನಾತಕೋತ್ತರ ಎಂ.ಕಾಮ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಸಿದ್ಧಾರ್ಥ ಪ್ರಕಾಶ ದಿವಟೆ ಬೆಂಗಳೂರಿನ ಸ್ಪೋರ್ಟ್ಸ್ ಅತಾರಿಟಿ ಆಫ್ ಇಂಡಿಯಾ ಶ್ಯೂಟಿಂಗ್ ರೇಂಜ್ ನಲ್ಲಿ ನಡೆದ ಕರ್ನಾಟಕ ರಾಜ್ಯದ ಪ್ರತಿಷ್ಟಿತ ದಸರಾ ಸಿ.ಎಂ ಕಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ೧೦ ಮೀಟರ್ ಏರ್ ಪಿಸ್ಟಲ್ ವಿಭಾಗದಲ್ಲಿ ವಿಜೇತನಾಗಿ ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ.
ಸಿದ್ಧಾರ್ಥ ಅವರ ಸಾಧನೆಯನ್ನು ಕನಕದಾಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪಾಲಕರು ಮತ್ತು ಸ್ನೇಹಿತರು, ಬಂದು-ಬಳಗದವರು ಶುಭ ಹಾರೈಸಿದ್ದಾರೆ.
ಪ್ರಶಸ್ತಿ ವಿಜೇತ ಅವರಿಗೆ ಮಹಾವಿದ್ಯಾಲಯದ ಪಿ.ಯು ಪ್ರಾಚಾರ್ಯ ಮತ್ತು ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಸಂದೀಪ ಬೂದಿಹಾಳ ಮತ್ತು ಬೋಧಕ ವೃಂದ ಸತ್ಕರಿಸಿದರು.
ಈ ಸಂದಭ್ದಲ್ಲಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಬಿ. ಜಿ ಮಡ್ಲಿ, ಎಂ. ಕಾಮ್ ವಿಭಾಗದ ಸಂಯೋಜಕರಾದ ಶ್ರೀಮತಿ ಜಯದೇವಿ ಚರಂತಿಮಠ, ಎಂ. ಎ ಪತ್ರಿಕೋದ್ಯಮ ವಿಭಾಗದ ಸಂಯೋಜಕರಾದ ಬೀರೇಶ್ ತಿರಕಪ್ಪನವರ, ಶ್ರೀ ಎಚ್ ಆರ್ ಕುರಿ, ಪುಷ್ಪಾ ಡಂಗನವರ, ಮಹೇಶ ಲಿಮಯೆ, ಎಸ್.ಎಸ್ ಹಿರೇಮಠ, ಮಂಜುಳಾ ಪಟ್ಟೆದ, ಮಂಜುನಾಥ ಶಿರಗುಪ್ಪಿ, ಮಹೇಶ ಕೋರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.