25.4 C
Karnataka
Sunday, March 22, 2026
spot_img

ಲೋಕ್ ಅದಾಲತ್ ಪ್ರಕರಣಗಳು ಇತ್ಯರ್ಥಗೊಳ್ಳುವಲ್ಲಿ ನ್ಯಾಯಮೂರ್ತಿ ನರೇಂದ್ರ ಅವರ ಸಾಧನೆ ಅಪಾರವಾದದ್ದು –  ಮುಖ್ಯ ನ್ಯಾಯಮೂರ್ತಿ ವರಾಳೆ

ಬೆಂಗಳೂರು, ಅಕ್ಟೋಬರ್ 27, (ಕರ್ನಾಟಕ ವಾರ್ತೆ):

ಲೋಕ್ ಅದಾಲತ್ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಅಪಾರವಾದ ಸಾಧನೆ ಸಲ್ಲಿಸಿರುವುದಲ್ಲದೇ, ಸಿವಿಲ್ ಪ್ರಕರಣಗಳು, ಕ್ರಿಮಿನಲ್ ಪ್ರಕರಣ ಹಾಗೂ ತೆರಿಗೆ ವಿಷಯದಲ್ಲಿ ಅತ್ಯಂತ ಪರಿಣಿತಿ ಹೊಂದಿರುವ ಕರ್ನಾಟಕ ಉಚ್ಛ ನ್ಯಾಯಾಲಯದÀ ನ್ಯಾಯಮೂರ್ತಿ ಜಿ. ನರೇಂದ್ರ ಅವರ ಮುಂದಿನ ಭವಿಷ್ಯ ಒಳಿತಾಗಲಿ ಎಂದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ತಿಳಿಸಿದರು.

ಅವರು ಇಂದು ಹೈಕೋರ್ಟ್ ಕೋರ್ಟ್ ಹಾಲ್ 1 ರಲ್ಲಿ ಆಂಧ್ರಪ್ರದೇಶಕ್ಕೆ ವರ್ಗಾವಣೆಯಾಗಿರುವ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜಿ. ನರೇಂದ್ರ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಾ, ಲೋಕ್ ಅದಾಲತ್ ಮೂಲಕ ಪ್ರಕರಣಗಳ ಶೀಘ್ರ ವಿಲೇವಾರಿಗೆ ನ್ಯಾಯಮೂರ್ತಿ ನರೇಂದ್ರ ಅವರು ಬಹುಮುಖ್ಯ ಪಾತ್ರವಹಿಸಿದ್ದರು. ಲೋಕ್ ಅದಾಲತ್‍ನಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ ಮೂರನೇ ಸ್ಥಾನ ಗಳಿಸಿದೆ ಎಂದರು.

ನಂತರ ಮಾತನಾಡಿದ ನ್ಯಾಯಮೂರ್ತಿ ಜಿ. ನರೇಂದ್ರ ಅವರು ಕಳೆದ 9 ವರ್ಷದಿಂದ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿರುವುದು ತೃಪ್ತಿಕರವಾಗಿದೆ. ನ್ಯಾಯಾಂಗದÀ ಪರಿಮಿತಿಯಲ್ಲಿ ಎಲ್ಲರಿಗೂ ನ್ಯಾಯ ಕೊಡಿಸುವುದೇ ನಮ್ಮ ಗುರಿ. ನನ್ನ ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಎಲ್ ವಿಶಾಲ್ ರಘು ಅವರು ಮಾತನಾಡಿ ನ್ಯಾಯಮೂರ್ತಿ ಜಿ ನರೇಂದ್ರ ಅವರು ಜನವರಿ 2015ರಂದು ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡು, 2017 ರಿಂದ ಖಾಯಂ ನ್ಯಾಯಮೂರ್ತಿಗಳಾಗಿ ಬಡ್ತಿ ಹೊಂದಿದರು. ಶ್ರೀಯುತರ ಅವಧಿಯಲ್ಲಿ ಸುಮಾರು 21,811 ಪ್ರಕರಣಗಳು ಶೀಘ್ರವಾಗಿ ವಿಲೇವಾರಿ ಮಾಡಲಾಗಿದೆ ಎಂದರು.

ಜೂನ್ 2003ರಂದು ಅವರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನಂತರ ಕಾನೂನು ಸೇವೆಗಳ ಪ್ರಾಧಿಕಾರದ ಚಿತ್ರಣವನ್ನು ಬದಲಿಸಿದ್ದಾರೆ. ಜನ ಸಾಮಾನ್ಯರಿಗೆ ಕಾನೂನು ಅರಿವು ಮತ್ತು ನೆರವು ನೀಡುವಲ್ಲಿ ಪ್ರಾಧಿಕಾರದ ಪಾತ್ರ ಮಹತ್ವವಾಗಿದ್ದು, ಲಕ್ಷಾಂತರ ಕಾರ್ಯಕ್ರಮಗಳ ಮೂಲಕ ಕರ್ನಾಟಕ ಮೂಲೆ ಮೂಲೆಯನ್ನು ತಲುಪಿ ಪ್ರತಿಯೊಬ್ಬ ವ್ಯಕ್ತಿಗೂ ಕಾನೂನು ಅರಿವು ಮತ್ತು ನೆರವು ನೀಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದರು.

ಕನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು ನಡೆಸುವ “ಲೋಕ ಅದಾಲತ್”ಗೆ ಅತ್ಯಂತ ಪ್ರಾಮುಖ್ಯತೆ ನೀಡಿದ್ದರು. ನ್ಯಾಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ನಿಗದಿತ ಅವಧಿಯಲ್ಲಿ ನ್ಯಾಯ ಸಿಗಬೇಕೆಂದು 3 ತಿಂಗಳ ಅವಧಿಯೊಳಗಡೆ 59,12,050 ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಸುಮಾರು 3,336 ಕೋಟಿ ರೂಪಾಯಿಗಳ ಪರಿಹಾರ ಧನ ನೀಡಲು ಆದೇಶಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಇಲ್ಲಿ ನೀಡಿದಂತಹ ಉತ್ತಮ ತೀರ್ಪುಗಳಂತೆಯೇ ಆಂಧ್ರಪ್ರದೇಶದ ಉಚ್ಛ ನ್ಯಾಯಾಲಯದಲ್ಲಿಯೂ ಸಹ ಅತ್ಯುನ್ನತ ತೀರ್ಪುಗಳನ್ನು ನೀಡುತ್ತೀರೆಂದು ನಮ್ಮೆಲ್ಲರ ಆಶಯ ಹಾಗೂ ಅಚಲವಾದ ನಂಬಿಕೆ. ಇದೇ ಜನಮನ್ನಣೆ ಪ್ರೀತಿ ವಿಶ್ವಾಸ ಆಂಧ್ರಪ್ರದೇಶದ ಉಚ್ಛನ್ಯಾಯಾಲಯದಲ್ಲಿಯೂ ಸಿಗಲಿ ಎಂದು ಆಶಿಸಿದರು.

ಬೀಳ್ಕೊಡುಗೆ ಸಮಾರಂಭದಲ್ಲಿ ಬೆಂಗಳೂರು, ಕಲಬುರಗಿ ಧಾರವಾಡ ವಿಭಾಗದ ನ್ಯಾಯಾಧೀಶರು, ವಕೀಲರು ಉಪಸ್ಥಿತರಿದ್ದರು.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!