ಭಾರತ ಚುನಾವಣಾ ಆಯೋಗವು 2023 ನೇ ಸಾಲಿನಲ್ಲಿ ಮತದಾರರ ಶಿಕ್ಷಣ ಮತ್ತು ಜಾಗೃತಿಯ ಕುರಿತು ಉತ್ತಮ ಪ್ರಚಾರಕ್ಕಾಗಿ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿಗಾಗಿ ರಾಜ್ಯದ ಮಾಧ್ಯಮ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ (ದೂರದರ್ಶನ) ವಿದ್ಯುನ್ಮಾನ ಮಾಧ್ಯಮ (ರೇಡಿಯೊ) ಆನ್‍ಲೈನ್ (ಇಂಟರ್ನೆಟ್) / ಸಾಮಾಜಿಕ ಮಾಧ್ಯಮಗಳ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಚುನಾವಣೆಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಚುನಾವಣಾ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮಾಧ್ಯಮ ಸಂಸ್ಥೆಗಳ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸುವುದು, ಚುನಾವಣಾ ಪ್ರಕ್ರಿಯೆಯ ಬಗ್ಗೆ ಜನರಿಗೆ ಶಿಕ್ಷಣ, ಚುನಾವಣೆ ಸಂಬಂಧಿತ ಐಟಿ ಅಪ್ಲಿಕೇಶನ್‍ಗಳು, ವಿಶಿಷ್ಟ/ರಿಮೋಟ್ ಮತದಾನ ಕೇಂದ್ರಗಳ ಕುರಿತಂತೆ ವಿವರವಾದ ವರದಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಹ ಮತದಾನ ಮತ್ತು ನೋಂದಣಿಯ ಪ್ರಾಮುಖ್ಯತೆ. ಅಲ್ಲದೆ ಜನರಲ್ಲಿ ಜಾಗೃತಿ ಮೂಡಿಸುವಂತಹ ವಿಶೇಷ ವರದಿಗಳನ್ನು ಪರಿಗಣಿಸಲಾಗುವುದು. ಪ್ರಶಸ್ತಿಯನ್ನು 2024ರ ಜನವರಿ 25 ರಂದು ನಡೆಯುವ “ರಾಷ್ಟ್ರೀಯ ಮತದಾರ ದಿನ”Àದಂದು ಪ್ರದಾನ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಮಾನದಂಡಗಳು :
ಮತದಾರರ ಜಾಗೃತಿ ಅಭಿಯಾನ – ಮತದಾರರಿಗೆ ನಿಖರವಾದ, ಸಮತೋಲಿತ ಮಾಹಿತಿಯನ್ನು ಒದಗಿಸುವುದು, ವಿಶೇಷ ಪ್ರದರ್ಶನಗಳು / ಚರ್ಚೆಗಳು / ತಜ್ಞ-ಆಧಾರಿತ ಚರ್ಚಾ ಕಾರ್ಯಕ್ರಮ ಆಯೋಜಿಸಿರುವುದು. ಮಾಧ್ಯಮದ ವ್ಯಾಪ್ತಿ, ವಿಸ್ತಾರ- ಪ್ರಮಾಣ ಮತ್ತು ತಲುಪುವಿಕೆ, ಪ್ರವೇಶಿಸಬಹುದಾದ ಚುನಾವಣೆಗಳು, ಚುನಾವಣೆ ಸಂಬಂಧಿತ ಐಟಿ ಅಪ್ಲಿಕೇಶನ್‍ಗಳು, ವಿಶಿಷ್ಟ / ರಿಮೋಟ್ ಮತಗಟ್ಟೆಗಳ ಕುರಿತಾದ ವಿಷಯಗಳ ಕುರಿತು ಪರಿಣಾಮಕಾರಿಯಾಗಿ ಬೆಳಕು ಚೆಲ್ಲಿರಬೇಕು. ಚುನಾವಣಾ ನಿರ್ವಹಣೆಯಲ್ಲಿ ಭಾರತ ಚುನಾವಣಾ ಆಯೋಗ / ಮುಖ್ಯ ಚುನಾವಣಾ ಆಯುಕ್ತರು ಹೊಸ ಉಪಕ್ರಮಗಳು ಇತ್ಯಾದಿಗಳ ಬಗ್ಗೆ ತಿಳುವಳಿಕೆ ಮೂಡಿಸುವಂತಿರಬೇಕು.
ಚುನಾವಣಾ ಸಂಬಂಧಿತ ತಪ್ಪು ಮಾಹಿತಿಯನ್ನು ಪ್ರಚಾರ ಮಾಡಬಾರದು ಮತ್ತು ವಾಸ್ತವಿಕವಾಗಿ ಸರಿಯಾದ ಮತ್ತು ಪರಿಶೀಲಿಸಿದ ಮಾಹಿತಿಯನ್ನು ಎತ್ತಿ ಹಿಡಿಯುವಂತಿರಬೇಕು. ಸಾರ್ವಜನಿಕರ ಮೇಲೆ ಪ್ರಭಾವ ಬೀರುವ ಯಾವುದೇ ಪುರಾವೆ ಮತ್ತು ಯಾವುದೇ ಇತರ ಸಂಬಂಧಿತ ಅಂಶಗಳು ಒಳಗೊಂಡಿರಬಾರದು.
ಪ್ರವೇಶದ ಷರತ್ತುಗಳು :
ಸಂಬಂಧಿತ ಅವಧಿಯಲ್ಲಿ ಮಾಹಿತಿಯನ್ನು ಪ್ರಕಟಿಸಿರಬೇಕು ಅಥವಾ ಪ್ರಸಾರ ಮಾಡಿರಬೇಕು.
ಮುದ್ರಣ ಮಾಧ್ಯಮಗಳು:
ಸಂಬಂಧಿತ ಅವಧಿಯಲ್ಲಿ ಕೈಗೊಳ್ಳಲಾದ ಕೆಲಸದ ಸಾರಾಂಶ, ಅದರಲ್ಲಿ ಒಳಗೊಂಡಿರಬೇಕಾದ ಸುದ್ದಿಗಳು / ಲೇಖನಗಳ ಸಂಖ್ಯೆ ಮತ್ತು ಮುದ್ರಣವಾದ ಸುದ್ದಿಗಳು / ಲೇಖನಗಳು ಚದರ ಸೆಂಟಿಮೀಟರ್‍ಗಳಲ್ಲಿ ಇರತಕ್ಕದ್ದು.
ಮುದ್ರಣವಾದ ಲೇಖನ / ಸುದ್ದಿಗಳ ಪೂರ್ಣಗಾತ್ರದ ಪೋಟೋ ಕಾಫಿ ಅಥವಾ ಪಿ.ಡಿ.ಎಫ್ ಸಾಪ್ಟ್ ಕಾಫಿಗಳನ್ನು ಅಥವಾ ಪ್ರಕಟವಾದ ಸುದ್ದಿ / ಲೇಖನಗಳ ವೆಬ್‍ಲಿಂಕ್ ಹೊಂದಿರುವುದು ಕಡ್ಡಾಯ.
ನೇರವಾಗಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವಿಕೆ ಇತ್ಯಾದಿ ಯಾವುದೇ ಇತರ ಚಟುವಟಿಕೆಯ ವಿವರ ಹಾಗೂ ಇತರ ಮಾಹಿತಿಯನ್ನು ಒಳಗೊಂಡಿರಬೇಕು.
ಬ್ರಾಡ್‍ಕಾಸ್ಟ್ ಟೆಲಿವಿಷನ್ (ಎಲೆಕ್ಟ್ರಾನಿಕ್) ಮತ್ತು ರೇಡಿಯೋ (ಎಲೆಕ್ಟ್ರಾನಿಕ್) ಮಾಧ್ಯಮಗಳು:
ಸಂಬಂಧಿತ ಅವಧಿಯಲ್ಲಿ ನಡೆಸಿದ ಪ್ರಚಾರ/ಕೆಲಸದ ಕುರಿತು ಸಂಕ್ಷಿಪ್ತ ವಿವರ ಹೊಂದಿರಬೇಕು.
ಪ್ರಸಾರದ ಅವಧಿ ಮತ್ತು ಆವರ್ತನದೊಂದಿಗೆ ವಸ್ತು (ಸಿಡಿ ಅಥವಾ ಡಿವಿಡಿ ಅಥವಾ ಪೆನ್ ಡ್ರೈವ್‍ನಲ್ಲಿ) ಮತ್ತು ಅವಧಿಯಲ್ಲಿ ಪ್ರತಿ ಸ್ಥಳದ ಪ್ರಸಾರದ ಒಟ್ಟು ಸಮಯ ನಮೂದಿಸಿರಬೇಕು.
ಎಲ್ಲಾ ಸ್ಥಳಗಳು/ಸುದ್ದಿಗಳಿಗಾಗಿ ಒಟ್ಟು ಪ್ರಸಾರ ಸಮಯದ ಮೊತ್ತ. ನೇರ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯಂತಹ ಯಾವುದೇ ಇತರ ಚಟುವಟಿಕೆಗಳು.
ಟೆಲಿಕಾಸ್ಟ್ / ಪ್ರಸಾರದ ಅವಧಿ, ದಿನಾಂಕ ಮತ್ತು ಸಮಯ, ಆವರ್ತನದೊಂದಿಗೆ ಸಿಡಿ / ಡಿವಿಡಿ / ಪೆನ್ ಡ್ರೈವ್ ಅಥವಾ ಇತರ ಡಿಜಿಟಲ್ ಮಾಧ್ಯಮದಲ್ಲಿ ಮತದಾರರ ಜಾಗೃತಿ ಕುರಿತ ನುಡಿಚಿತ್ರ ಅಥವಾ ಕಾರ್ಯಕ್ರಮಗಳನ್ನು ಮಾಡಿರಬೇಕು.
ಆನ್‍ಲೈನ್ (ಇಂಟರ್ನೆಟ್)/ಸಾಮಾಜಿಕ ಮಾಧ್ಯಮಗಳು :
ಪೆÇೀಸ್ಟ್‍ಗಳು/ ಬ್ಲಾಗ್‍ಗಳು/ ಅಭಿಯಾನಗಳು/ ಟ್ವೀಟ್‍ಗಳು/ ಲೇಖನಗಳು ಇತ್ಯಾದಿಗಳ ಸಂಖ್ಯೆಯನ್ನು ಒಳಗೊಂಡಿರುವ ಸಂಬಂಧಿತ ಅವಧಿಯಲ್ಲಿ ನಡೆಸಿದ ಕೆಲಸದ ಸಾರಾಂಶ.
ಸಂಬಂಧಪಟ್ಟ ಲೇಖನಗಳ ಪಿಡಿಎಫ್ ಸಾಫ್ಟ್ ಕಾಪಿ ಅಥವಾ ಸಂಬಂಧಿತ ವೆಬ್ ವಿಳಾಸದ ಲಿಂಕ್ ಹೊಂದಿರಬೇಕು.
ನೇರವಾಗಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವುದು ಇತ್ಯಾದಿ ಯಾವುದೇ ಇತರ ಚಟುವಟಿಕೆಯ ವಿವರ. ಆನ್‍ಲೈನ್ ಚಟುವಟಿಕೆಯ ಪರಿಣಾಮದ ವಿವರಗಳು ಸೇರಿದಂತೆ ಯಾವುದೇ ಇತರ ಮಾಹಿತಿ ಒಳಗೊಂಡಿರಬೇಕು.
ಪ್ರಮುಖ ಅಂಶಗಳು :
ಆಂಗ್ಲ / ಹಿಂದಿ ಹೊರತುಪಡಿಸಿ ಬೇರೆ ಭಾμÉಯಲ್ಲಿ ಸಲ್ಲಿಸಲಾದ ಎಲ್ಲಾ ನಮೂದುಗಳಿಗೆ ಜೊತೆಯಲ್ಲಿರುವ ಆಂಗ್ಲ ಭಾಷೆಯ ಅನುವಾದದ ಅಗತ್ಯವಿರುತ್ತದೆ, ವಿಫಲವಾದರೆ ನಿರಾಕರಣೆಗೆ ಒಳಪಟ್ಟಿರುತ್ತದೆ.
ಪ್ರಸಾರದ ವಿಷಯವನ್ನು ಸಲ್ಲಿಸುವ ಅರ್ಜಿದಾರರು ತೀರ್ಪುಗಾರರ ವೈಶಿಷ್ಟ್ಯಗಳು/ಕಾರ್ಯಕ್ರಮದ ಮೊದಲ ಹತ್ತು ನಿಮಿಷಗಳನ್ನು ಮಾತ್ರ ಬಳಸಬಹುದೆಂದು ತಿಳಿದಿರಬೇಕು. ಆಯೋಗದ ತೀರ್ಮಾನವು ಅಂತಿಮವಾಗಿರುತ್ತದೆ. ಯಾವುದೇ ಪತ್ರವ್ಯವಹಾರಕ್ಕೆ ಅವಕಾಶ ನೀಡಲಾಗುವುದಿಲ್ಲ. ಈ ನಿಟ್ಟಿನಲ್ಲಿ ಆಯೋಗವು ಎಲ್ಲಾ ಹಕ್ಕುಗಳನ್ನು ಹೊಂದಿದೆ.
ಮಾಧ್ಯಮ ಸಂಸ್ಥೆಗಳು ನಮೂದುಗಳು ಹೆಸರು, ವಿಳಾಸ, ದೂರವಾಣಿ ಮತ್ತು ಫ್ಯಾಕ್ಸ್ ಸಂಖ್ಯೆಗಳು ಮತ್ತು ಇಮೇಲ್ ಅನ್ನು ಹೊಂದಿರಬೇಕು. ಮಾಧ್ಯಮ ಸಂಸ್ಥೆಗಳು ವಿವರಗಳನ್ನು ಡಿಸೆಂಬರ್ 10 ರೊಳಗೆ ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರಾಜೇಶ್ ಕುಮಾರ್ ಸಿಂಗ್, ಅಧೀನ ಕಾರ್ಯದರ್ಶಿ (ಸಂವಹನ), ಭಾರತ ಚುನಾವಣಾ ಆಯೋಗ, ನಿರ್ವಚನ ಸದನ, ಅಶೋಕ ರಸ್ತೆ, ನವದೆಹಲಿ 110001. ಹಾಗೂ ಇಮೇಲ್: media-division@eci.gov.in ದೂರವಾಣಿ ಸಂಖ್ಯೆ 011-23052131 ನ್ನು ಸಂಪರ್ಕಿಸಬಹುದಾಗಿದೆ