ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಅ.26: ಬಂಜಾರ ಮಹಿಳೆಯರಿಗೆ ಸಾಂಪ್ರದಾಯಿಕ ಕಸೂತಿ ಮತ್ತು ಹೊಲಿಗೆ ತರಬೇತಿಯನ್ನು ನೀಡಲು ಅರ್ಹ ತರಬೇತಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ನಿರುದ್ಯೋಗಿ ಬಂಜಾರ ಮಹಿಳೆಯರಿಗೆ ಸಾಂಪ್ರದಾಯಿಕ ಕಸೂತಿ ಮತ್ತು ಪೂರಕ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಾಂಡಾಗಳಲ್ಲಿ ಅನುಸ್ಠಾನಗೊಳಿಸಬೇಕಾಗಿರುವುದರಿಂದ ತಾಂಡಾಗಳಲ್ಲಿ ವಾಸವಾಗಿರುವ ಅರ್ಹ ಬಂಜಾರ ಮಹಿಳಾ ಅಭ್ಯರ್ಥಿಗಳನ್ನು ಗುರುತಿಸಿ, ಅವರಿಗೆ ಬಂಜಾರ ಕಸೂತಿ ಕಲೆ ಮತ್ತು ಪೂರಕ ಹೊಲಿಗೆ ತರಬೇತಿಯನ್ನು ನೀಡಬೇಕಾಗಿರುತ್ತದೆ.
ಆಸಕ್ತ ಸಂಸ್ಥೆಯವರು ಅಕ್ಟೋಬರ್ 31 ರೊಳಗಾಗಿ ನಿಗಮದ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಧಾರವಾಡ ಜಿಲ್ಲಾ ಬಂಜಾರ ಭವನ, ಇ.ಪಿ.ಎಫ್. ಕಚೇರಿ ಪಕ್ಕ, ನವನಗರ, ಹುಬ್ಬಳ್ಳಿ-580025 ಕಾರ್ಯಾಲಯ ಅಥವಾ ದೂರವಾಣಿ ಸಂಖ್ಯೆ 99452 11221, 96063 09713, 90082 59228 ಸಂಪರ್ಕಿಸುವಂತೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.