Site icon MOODANA Web Edition

ತರಕಾರಿಗಳಲ್ಲಿ ಭಾರೀ ಲೋಹಗಳು ಮತ್ತು ಕೀಟನಾಶಕಗಳ ಅವಶೇಷಗಳ ಅಂಶಗಳ ಗುಣಮಟ್ಟ ಪರೀಕ್ಷಿಸಲು ವಿಶೇಷ ಆಂದೋಲನ

meal, salad, cucumbers-2834549.jpg

ಬೆಂಗಳೂರು, ಅಕ್ಟೋಬರ್ 26 (ಕರ್ನಾಟಕ ವಾರ್ತೆ):
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಬೆಂಗಳೂರಿನಾದ್ಯಂತ ವಿವಿಧ ತರಕಾರಿಗಳಲ್ಲಿ ಭಾರೀ ಲೋಹಗಳು ಮತ್ತು ಕೀಟನಾಶಕಗಳ ಅವಶೇಷಗಳ ಅಂಶಗಳ ಗುಣಮಟ್ಟವನ್ನು ಪರೀಕ್ಷಿಸಲು ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.
Environment Management and Policy Research Insititute ಸಂಸ್ಥೆಯು ವಿವಿಧ ತರಕಾರಿಗಳ ಗುಣಮಟ್ಟ ಪರೀಕ್ಷೆ ನಡೆಸಿದ್ದು, ಪರೀಕ್ಷೆಯಲ್ಲಿ ಭಾರೀ ಲೋಹದ ಅಂಶಗಳು ಕಂಡುಬಂದಿರುವ ಮಾಹಿತಿಯು ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಗಮನಕ್ಕೆ ಬಂದಿರುತ್ತದೆ.
ತರಕಾರಿಗಳನ್ನೊಳಗೊಂಡಂತೆ ಯಾವುದೇ ಆಹಾರ ಮಾದರಿಗಳಲ್ಲಿ ಭಾರೀ ಲೋಹದ ಅಂಶಗಳು ನಿಗದಿತ ಮಾನದಂಡಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಲ್ಲಿ ಅಂತಹ ಆಹಾರ ಪದಾರ್ಥಗಳನ್ನು ಅಸುರಕ್ಷಿತವೆಂದು ಪರಿಗಣಿಸಿ ಅಂತಹ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ – 2006ರ ಸೆಕ್ಷನ್ 59 ರನ್ವಯ 6 ತಿಂಗಳಿಂದ 6 ವರ್ಷದವರೆಗೆ ಜೈಲುವಾಸ ಮತ್ತು ರೂ.1 ಲಕ್ಷದಿಂದ ರೂ.5 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿರುತ್ತದೆ. ವಿಶ್ಲೇಷಣಾ ಫಲಿತಾಂಶದ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version