ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಅ.26: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ 21 ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ವ್ಯಕ್ತಿಗಳಿಗೆ ಧೀಮಂತ ಸನ್ಮಾನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಪಾಲಿಕೆ ವ್ಯಾಪ್ತಿಯ ನಿವಾಸಿಯಾಗಿರಬೇಕು. ಅರ್ಜಿ ಸಲ್ಲಿಸುವ ಸಂಘ ಸಂಸ್ಥೆಗಳು ಪಾಲಿಕೆ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿರಬೇಕು. ಅರ್ಜಿಯೊಂದಿಗೆ ಸಾಧನೆ ಮಾಡಿದ ಬಗ್ಗೆ ಅಗತ್ಯ ದಾಖಲೆಗಳು ಹಾಗೂ ಕಡ್ಡಾಯವಾಗಿ ತಮ್ಮ ವಿಳಾಸವನ್ನು ದೃಢೀಕರಿಸುವ ದಾಖಲೆಯನ್ನು ಸಲ್ಲಿಸಬೇಕು. ಪ್ರಶಸ್ತಿ ಆಯ್ಕೆಯಲ್ಲಿ ಪಾಲಿಕೆ ನಿರ್ಣಯವೇ ಅಂತಿಮವಾಗಿರುವುದು.
ಅರ್ಜಿಗಳನ್ನು ಪಾಲಿಕೆಯ ಉಪಮಹಾಪೌರರ ಕಚೇರಿ ಅಥವಾ ಕಮೀಟಿ ಸದಸ್ಯರ ಮುಖಾಂತರ ಅಥವಾ ಇಮೇಲ್ ವಿಳಾಸ hohdmc@gmail.com ಅಥವಾ ವಾಟ್ಸ್ ಅಪ್ ನಂಬರ್ 96117 48103 ಮೂಲಕ ಸಲ್ಲಿಸಬಹುದಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಉಪಮಹಾಪೌರರಾದ ಸತೀಶ ಹಾನಗಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.