ಬೆಂಗಳೂರು, ಅಕ್ಟೋಬರ್ 09 (ಕರ್ನಾಟಕ ವಾರ್ತೆ) :
ದೇಸಿ, ಸಮೇತಿ (ದಕ್ಷಿಣ), ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು ಮತ್ತು ರಾಷ್ಟ್ರೀಯ ಕೃಷಿ ನಿರ್ವಹಣಾ ಸಂಸ್ಥೆ (ಮ್ಯಾನೇಜ್), ಹೈದರಾಬಾದ್‍ರವರ ಸಹಯೋಗದೊಂದಿಗೆ ಇದೇ ಪ್ರಪ್ರಥಮ ಬಾರಿಗೆ ಬೃಹತ್ ದೇಸಿ ಸಮ್ಮೇಳನವನ್ನು ಡಾ: ಬಾಬು ರಾಜೇಂದ್ರ ಪ್ರಸಾದ್‍ಅಂತರಾಷ್ಟ್ರೀಯ ಸಮಾವೇಶ ಭವನ, ಕೃವಿವಿ, ಜಿಕೆವಿಕೆ, ಬೆಂಗಳೂರಿನಲ್ಲಿ 18ನೇ ಅಕ್ಟೋಬರ್ 2023ರಂದು ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ರÀವರು ನೆರವೇರಿಸುತ್ತಾರೆ. ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿಗಳು ಡಿ.ಕೆ.ಶಿವಕುಮಾರ್ ಹಾಗೂ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ, ಮತ್ತು ಸಹ ಕುಲಾಧಿಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರವರು ಭಾಗವಹಿಸಲಿದ್ದಾರೆ. ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಒಂದು ದಿನದ ಸಮ್ಮೇಳನದ ಮುಖ್ಯ ಉದ್ದೇಶವೆಂದರೆÉ ದಕ್ಷಿಣ ಕರ್ನಾಟಕದ 16 ಜಿಲ್ಲೆಗಳ ಕೃಷಿ ಪರಿಕರ ಮಾರಾಟಗಾರರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದು. ಸ್ಮರಣ ಸಂಚಿಕೆ ಬಿಡುಗಡೆ, ವಸ್ತು ಪ್ರದರ್ಶನ, ವಿಚಾರ ವಿನಿಮಯ, ಯಶೋಗಾಥೆಗಳು, ಚಿಂತನ ಮತ್ತು ಮಂಥನ ಮುಂತಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲುವುದು. ಈ ಸಮ್ಮೇಳನದಲ್ಲಿ ಸುಮಾರು 3000ಕೃಷಿ ಪರಿಕರ ಉದ್ದಿಮೆದಾರರು ಭಾಗವಹಿಸಲಿದ್ದಾರೆ.
ದೇಶದÀಲ್ಲಿ ಕೃಷಿ-ಪರಿಕರ ಮಾರಾಟಗಾರರು ಕೃಷಿಪರಿಕರಗಳನ್ನು ರೈತರಿಗೆಮಾರಾಟ ಮಾಡುವ ಜೊತೆಗೆ ನಿರಂತರವಾಗಿ ಕೃಷಿ ತಾಂತ್ರಿಕ ಸಲಹಾ ಸೇವೆಯನ್ನು ನೀಡುವ ಮಹತ್ತರವಾದ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಬಹುತೇಕ ಕೃಷಿ ಪರಿಕರ ಮಾರಾಟಗಾರರು ಔಪಚಾರಿಕ ಕೃಷಿ ಶಿಕ್ಷಣವನ್ನು ಪಡೆದಿರುವುದಿಲ್ಲ. ಇವರಿಗೆ ಕೃಷಿಯ ಬಗ್ಗೆ ವೈಜ್ಞಾನಿಕ ಜ್ಞಾನ ನೀಡುವ ಉದ್ದೇಶದಿಂದ ದೇಶಾದ್ಯಂತ ಕೇಂದ್ರ ಸರ್ಕಾರದ ಹೈದರಾಬಾದ್‍ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ (ಮ್ಯಾನೇಜ್)ರವರು ಕೃಷಿ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಸಹಯೋಗದೊಂದಿಗೆ ಒಂದು ವರ್ಷದ ಅವಧಿಯ “ಕೃಷಿ ವಿಸ್ತರಣಾ ಸೇವೆಯಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಡಿಪ್ಲೊಮಾ ಕೋರ್ಸ್” (ದೇಸಿ) ಅನ್ನು 2003 ರಿಂದ ನೀಡುತ್ತಿದೆ. ದೇಸಿ ಪ್ರಮಾಣ ಪತ್ರ ಪಡೆದವರು ಮಾತ್ರ ಕೃಷಿ ಪರಿಕರ ಮಾರಾಟ ಮಾಡಲು ಲೈಸೆನ್ಸ್ ಪಡೆಯಬಹುದು. ಕೃಷಿ ಪರಿಕರ ಮಾರಾಟಗಾರರು ತಮ್ಮ ವ್ಯಾಪಾರವನ್ನು ವೃದ್ಧಿಗೊಳಿಸÀುವ ಜೊತೆಗೆ ಅರೆ-ವಿಸ್ತರಣಾ ಕಾರ್ಯಕರ್ತರಾಗಿ ಯೂಸಹ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.