ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಅ.07: ಧಾರವಾಡ ತಾಲೂಕಿನ ಬರ ಅಧ್ಯಯನದ ನಂತರ ಹುಬ್ಬಳ್ಳಿ ತಾಲೂಕಿನ ಗೋಕುಲ್ ಗ್ರಾಮದ ರೈತರಾದ ನಿಂಗಪ್ಪ ಹೆಚ್. ಕದಂ, ಬಸಪ್ಪ ಸಿ. ಮ್ಯಾಗೇರಿ ಮತ್ತು ರೈತ ಮಹಿಳೆ ರತ್ನವ್ವ ಎಂ. ಪಾಟೀಲ್ ಅವರ ಜಮೀನುಗಳಲ್ಲಿದ್ದ ಗೋವಿನಜೋಳ ಬೆಳೆಗಳು ಹಾಗೂ ಸೋಯಾಬೀನ್ ಬೆಳೆ ಹಾನಿಯನ್ನು ತಂಡವು ಪರಿಶೀಲಿಸಿತು. ನಂತರ ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದ ರೈತ ಶಿವನಗೌಡ ಪಾಟೀಲ್ ಅವರ ಜಮೀನಿಗೆ ಭೇಟಿ ಗೋವಿನ ಜೋಳ ಬೆಳೆ ಬೆಳವಣಿಗೆ ಆಗದೇ ಇರುವುದನ್ನು ಪರಿಶೀಲಿಸಿ ರೈತರಿಂದ ತಂಡವು ಮಾಹಿತಿ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಶಾಸಕ ಎನ್.ಎಚ್. ಕೊನರಡ್ಡಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ. ಟಿ.ಕೆ. ಕೃಷಿ ಇಲಾಖೆಯ ಅಧಿಕಾರಿಗಳಾದ ಡಾ: ಕಿರಣಕುಮಾರ, ಡಾ: ಜಯಶ್ರೀ ಹಿರೇಮಠ, ಸಹಾಯಕ ನಿರ್ದೇಶಕ ರಾಜಶೇಖರ ಅನಗೌಡರ, ತಹಶೀಲ್ದಾರ ಪ್ರಕಾಶ ನಾಶಿ, ಕೆ.ಆರ್. ಪಾಟೀಲ, ರಾಯನಾಳ ಗ್ರಾಮಪಂಚಾಯಿತಿ ಅಧ್ಯಕ್ಷ ಆರ್.ಜಿ. ಮೇಟಿ, ದೇವರಗುಡಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಲ್ಲಾ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.