
ಹುಬ್ಬಳ್ಳಿ. ಉಣಕಲ್‍ನಲ್ಲಿರುವ ಬಾಲಕರ ಸರ್ಕಾರಿ ಬಾಲಮಂದಿರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಧಾರವಾಡ ಹಾಗೂ ಏಕದಂತ ಚಾರಿಟಿ ಫೌಂಡೇಶನ್ (ರಿ). ಇವರುಗಳ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ “ಸ್ವಚ್ಛ ಹಿ ಸೇವಾ” ಕಾರ್ಯಕ್ರಮದ ಅಂಗವಾಗಿ ಶಿರಢಿ ನಗರದ ಶ್ರೀ ಸಾಯಿ ಮಂದಿರದ ಆವರಣದ ಉದ್ಯಾನವನ್ನು ಸ್ವಚ್ಛ ಮಾಡುವ ಕಾರ್ಯವನ್ನು ಭಾನುವಾರದಂದು ಕೈಗೊಳ್ಳಲಾಯಿತು. ಬಾಲಕರ ಸರ್ಕಾರಿ ಬಾಲಮಂದಿರ ಉಣಕಲ್ ಹುಬ್ಬಳ್ಳಿ ಸಂಸ್ಥೆಯ 42 ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಸ್ವಚ್ಛತೆ ಮಾಡಿ ಸಾರ್ವಜನಿಕರಿಗೆ ಮಾದರಿಯಾದರು. ಮಕ್ಕಳ ಈ ಕಾರ್ಯವನ್ನು ಶ್ರೀ ಸಾಯಿ ಮಂದಿರದ ಆಡಳಿತ ಮಂಡಳಿಯ ಪದಾಧಿಕಾರಿಗಳು ಶ್ಲಾಘಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಧಾರವಾಡ ಇವರ ಮಾರ್ಗದರ್ಶನದಲ್ಲಿ ಬಾಲಮಂದಿರದ ಅಧೀಕ್ಷಕರಾದ ಮಂಜುನಾಥ ಕುಂಬಾರ, ಏಕದಂತ ಚಾರಿಟಿ ಫೌಂಡೇಶನ್ (ರಿ) ಸಂಸ್ಥೆಯ ಅಧ್ಯಕ್ಷರಾದ ಡಾ: ಸಚಿನ್ ಅಂಬೋರೆ ಇವರ ಮಾರ್ಗದರ್ಶನದಲ್ಲಿ ಡಾ: ಮಧು ಜಮನೂರ, ಪ್ರಧಾನ ಕಾರ್ಯದರ್ಶಿಗಳು ಇವರುಗಳ ಮುಂದಾಳತ್ವದಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಲಾಯಿತು. ವಿ. ರಾಧಿಕಾ ಪರಿವೀಕ್ಷಣಧಿಕಾರಿಗಳು, ಚನ್ನಮ್ಮ ವಾಲಿ ದ್ವಿದಸ, ಮೀನಾಕ್ಷಿ ಹೂಗಾರ ಆಪ್ತ ಸಮಾಲೋಚಕರು, ಬಸವರಾಜ ಗೊಕಾವಿ ಗೃಹ ಪಾಲಕರು, ರೇಣುಕಾ ದೊಡಮನಿ ಮುಂತಾದವರು ಉಪಸ್ಥಿತರಿದ್ದರು.