ಬೆಂಗಳೂರು, ಅಕ್ಟೋಬರ್ 7 (ಕರ್ನಾಟಕ ವಾರ್ತೆ):
ಮಾನವ ಕಳ್ಳಸಾಗಣೆ ಹಾಗೂ ಜೀತ ಪದ್ದತಿಯಿಂದ ಶೋಷಣೆಗೆ ಒಳಗಾದ ಕುಟುಂಬಗಳನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸುವುದು ಅತ್ಯವಶ್ಯಕ ಎಂದು ಹೈಕೋರ್ಟ್ ನಿವೃತ್ತ ನ್ಯಾಯಧೀಶರು ಹಾಗೂ ನಾಸ್ಲಾ (ಸಾಗಣೆ ಹಾಗೂ ವಾಣಿಜ್ಯ ಲೈಂಗಿಕ ಶೋಷಣೆ ಸಂತ್ರಸ್ತರು) ಯೋಜನೆ – 2015 ನಿಯೋಜಿತ ನ್ಯಾಯಧೀಶರಾದ ಅಜಿತ್.ಜೆ. ಗುಂಜಲ್ ತಿಳಿಸಿದರು.
ಬೆಂಗಳೂರು ನಗರ ಜಲ್ಲೆಯ ಜಿಲ್ಲಾ ಕಾನೂನು ಸೇವೇಗಳ ಪ್ರಾಧಿಕಾರ ಹಾಗೂ ಮಾನವ ಕಳ್ಳಸಾಗಣೆ ಹಾಗೂ ಜೀತ ಪದ್ದತಿ ವಿರುದ್ದ ಕೆಲಸ ಮಾಡತ್ತಿರುವ ಮುಕ್ತಿ ಸಂಸ್ಥೆಯ ಸಹಯೋಗದಲ್ಲಿ ನಗರದ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಮಾನವ ಕಳ್ಳಸಾಗಣೆ ಕಾಯ್ದೆಗಳು ಕುರಿತಾಗಿ ಎಸ್.ಟಿ.ಎಫ್ ಹಾಗೂ ಡಿ.ಎಲ್.ಎಸ್.ಎ ಪಾಲುದಾರರ ಪಾತ್ರ ಹಾಗೂ ಜವಬ್ದಾರಿಗಳ ಕುರಿತಾಗಿ ಹಮ್ಮಿಕೊಳ್ಳಲಾದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಕಳ್ಳಸಾಗಣೆ ಶೋಷಣೆಯ ಒಂದು ಭಾಗವಾಗಿದ್ದು ಲಿಂಗ ತಾರತಮ್ಯವಿಲ್ಲದೆ ಸಂತ್ರಸ್ತರು ದೌಜ್ಯನಕ್ಕೆ ಒಳಗಾಗುತ್ತಿದ್ದಾರೆ. ಲೈಂಗಿಕ ಶೋಷಣೆಯಲ್ಲಿ ಮಹಿಳೆಯರು, ಅಪ್ರಾಪ್ತ ಬಾಲಕಿಯರು ಹೆಚ್ಚಾಗಿ ಸಿಲುಕಿರುತ್ತಾರೆ. ಮಾನವ ಕಳ್ಳಸಾಗಣೆ ತಡೆ ಕುರಿತು ಅನೇಕ ಕಾಯ್ದೆಗಳಿದ್ದರೂ ಈ ಪ್ರಕರಣಗಳು ಇನ್ನೂ ಜೀವಂತವಾಗಿದೆ. ಪೋಲೀಸ್, ನ್ಯಾಯಾಲಯ ಮುಂತಾದ ಇಲಾಖೆಗಳು ಸಮನ್ವಯ ಸಾಧಿಸಿ ಸಮಸ್ಯೆಯನ್ನು ಹತೋಟಿಗೆ ತರಬೇಕು. ಸಮಸ್ಯೆಯ ಮೂಲವನ್ನು ಹುಡುಕಿ ಸಂತ್ರಸ್ತರನ್ನು ಕಾಪಡಿ ಅವರಿಗೆ ಪುನರ್ವಸತಿ ಒದಗಿಸುವುದು ಬಹಳ ಮುಖ್ಯವಾಗಿದೆ. ಈ ಕಾರ್ಯಗಾರದಲ್ಲಿ ಮಾನವ ಕಳ್ಳಸಾಗಣೆ, ಜೀತಪದ್ದತಿ ವಿರುದ್ದ ಹೋರಾಡುವ ಸಂಸ್ಥೆಗಳು, ಪಾಲುದಾರರು ಭಾಗವಹಿಸುವುದರಿಂದ ಈ ಸಮಸ್ಯೆಗಳಿಗೆ ಮುಕ್ತಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತಾಡಿದ ಬೃಂದಾ ಅಡಿಗೆ ಅವರು ನಮ್ಮ ದೇಶದ ಒಳಗೆ, ಶೇಕಡ 90 ರಷ್ಟು ಮಾನವ ಕಳ್ಳಸಾಗಾಣೆ ನಡೆಯುತ್ತದೆ. ಅದರಲ್ಲಿ ಶೇಕಡ 40 ರಷ್ಟು ಮಕ್ಕಳು ಕಳ್ಳ ಸಾಗಣೆ ಸಹ ನಡೆಯುತ್ತದೆ. ಇವರಲ್ಲಿ ಶೇಕಡ 87 ರಷ್ಟು ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದವರಾಗಿದ್ದಾರೆ. ಮಹಿಳೆ / ಪುರುಷ ಜೀತ, ಒತ್ತಾಯಪೂರ್ವಕ ದುಡಿಮೆ, ಲೈಂಗಿಕ ದೌರ್ಜನ್ಯ, ಉದ್ಯೋಗ ಭರವಸೆಯಿಂದ ಶೋಷಣೆ ನಡೆಯುತ್ತಿದೆ. ಮಹಿಳೆಯರನ್ನು ವೇಶ್ಯಾವಾಟಿಕೆಗೆ ತೊಡಗಿಸಿ ನೀಲಿ ಚಿತ್ರಗಳ ಚಿತ್ರೀಕರಣಕ್ಕೆ ಬಳಸುವುದು ಸಹ ಕಂಡು ಬಂದಿದೆ. ಹೋಟೆಲ್‍ಗಳಲ್ಲಿ ಬಾಲ ಕಾರ್ಮಿಕರು ಮುಕ್ತಿಯಿಲ್ಲದೇ ದುಡಿಯುತ್ತಿರುವ ಬಹಳಷ್ಟು ಪ್ರಕರಣಗಳು ಕಂಡು ಬರುತ್ತಿದ್ದು, ಬಾಲ ಕಾರ್ಮಿಕರನ್ನು ರಕ್ಷಿಸಲು ಅಗತ್ಯ ಕ್ರಮವಹಿಸಬೇಕಾಗಿದೆ. ಮಾನವ ಕಳ್ಳಸಾಗಣಿಕೆ ಮಾಡಿ ಅವರ ಅಂಗಾಂಗ ಕ್ಯೂಯ್ಲು, ಚರ್ಮದ ಕಸಿ ಸಹ ನಡೆಸಲಾಗುತ್ತದೆ. ಐ.ಪಿ.ಸಿ. ಸೆಕ್ಷನ್ 363ರಡಿ ಅಪ್ರಾಪ್ತ ವಯಸ್ಕರ ಅಪಹರಣ, ಉದ್ಯೋಗದಲ್ಲಿ ತೊಡಗಿಸುವಿಕೆ, ಭಿಕ್ಷಾಟನೆಗೆ ತೊಡಗಿಸುವುದು ಅಪರಾಧವಾಗಿರುತ್ತದೆ. ಮುಕ್ತಿ ಸಂಸ್ಥೆಯು ಮಾನವ ಕಳ್ಳಸಾಗಣೆ ಹಾಗೂ ಜೀತ ಪದ್ದತಿ ವಿರುದ್ದ ಹೋರಾಡಿ ಅನೇಕ ಪ್ರಕರಣಗಳನ್ನು ಬೆಳಕಿಗೆ ತಂದು ಪರಿಹಾರ ಒದಗಿಸಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಧೀಶರಾದ ಹಾಗೂ ಬೆಂಗಳೂರು ನಗರ ಜಿಲ್ಲೆಯ ಡಿ ಎಲ್ ಎಸ್ ಎ ಅಧ್ಯಕ್ಷರಾದ ಮುರಳಿಧರ್ ಪೈ. ಬಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ನ್ಯಾಯಧೀಶರಾದ ಎಂ. ಎಲ್ ರಘುನಾಥ್, ಜಿಲ್ಲಾ ನ್ಯಾಯಾಧೀಶರಾದ ಎಂ.ವಿ ರೇಣುಕಾ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ ಬೆಂಗಳೂರು, ಪೋಲೀಸ್ ಕಮೀಷನರ್ ಬಿ.ದಯಾನಂದ, ಬೆಂಗಳೂರು ನಗರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಕಾಂತರಾಜ್ ಪಿ.ಎಸ್, ಪೋಲೀಸ್ ವರಿಷ್ಠಧಿಕಾರಿ ನಾಗೇಶ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದರಾಮಣ್ಣ. ಎಸ್, ಮುಕ್ತಿ ಸಂಸ್ಥೆಯ ಸಂಸ್ಥಾಪಕಿ ಬೃಂದಾ, ಡಿ.ಎಲ್.ಎಸ್.ಎ ಸದಸ್ಯರಾದ ವರದರಾಜ್.ಬಿ ಉಪಸ್ಥಿತರಿದ್ದರು,