ಬೆಂಗಳೂರು, ಅಕ್ಟೋಬರ್ 07, (ಕರ್ನಾಟಕ ವಾರ್ತೆ) :
ಮೈಸೂರಿನ ಕರಾಮುವಿಯು ಪ್ರಸಕ್ತ 2023-24ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಆರಂಭಿಸಿದ್ದು,ಸ್ನಾತಕ/ಸ್ನಾತಕೋತ್ತರ ಕೋರ್ಸ್‍ಗಳಾದ ಬಿ.ಎ / ಬಿ.ಕಾಂ / ಬಿ.ಬಿ.ಎ / ಬಿ.ಸಿ.ಎ / ಬಿ.ಎಸ್ಸಿ / ಬಿ.ಎಸ್.ಡಬ್ಲೂ / ಬಿ.ಎಲ್.ಐ.ಎಸ್ಸಿ. , ಎಂ.ಎ / ಎಂ.ಸಿ.ಜೆ / ಎಂ.ಕಾಂ / ಎಂ.ಬಿ.ಎ / ಎಂ.ಎಲ್.ಐ.ಎಸ್ಸಿ / ಎಂ.ಎಸ್ಸಿ / ಎಂ.ಸಿ.ಎ / ಎಂ.ಎಸ್.ಡಬ್ಲ್ಯೂ., ಪಿ.ಜಿ. ಸರ್ಟಿಫಿಕೇಟ್ ಪ್ರೋಗ್ರಾಮ್ಸ್ / ಡಿಪ್ಲೋಮಾ ಪ್ರೋಗ್ರಾಮ್ಸ್ / ಸರ್ಟಿಫಿಕೇಟ್ ಪ್ರೋಗ್ರಾಮ್ಸ್‍ಗಳಿಗೆ ಪ್ರವೇಶಾತಿಯನ್ನು ಪ್ರಾರಂಭಿಸಿದ್ದು, ಕರಾಮುವಿಯು ಮಲ್ಲೇಶ್ವರಂನ ಪ್ರಾದೇಶಿಕ ಕೇಂದ್ರದಲ್ಲಿ ಮಹಿಳಾ ಮತ್ತು ಪುರುಷ ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅವಕಾಶ ಕಲ್ಪಿಸಿದೆ. ಪ್ರಥಮ ವರ್ಷದ ಈ ಕೋರ್ಸ್‍ಗಳ ಪ್ರವೇಶಾತಿಯನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಕ್ಟೋಬರ್ 20ರ ವರೆಗೆ ವಿಸ್ತರಿಸಲಾಗಿದೆ.
ಮೈಸೂರಿನ ಕರಾಮುವಿ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿದ್ದು ನ್ಯಾಕ್ ಂ+ ಮಾನ್ಯತೆ ಪಡೆದಿದೆ.
ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್‍ಸೈಟ್ www.ksoumysuru.ac.in ನಲ್ಲಿ KSOU Admission Portal ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಆನ್‍ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯುವಂತೆ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಶಶಿಕಲಾ ಜೆ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.