Site icon MOODANA Web Edition

ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತ

ಬೆಂಗಳೂರು, ಅಕ್ಟೋಬರ್ 07 (ಕರ್ನಾಟಕ ವಾರ್ತೆ) :

ಮೈಸೂರು ದಸರಾ ಹಬ್ಬದ ಪ್ರಯುಕ್ತ ಪ್ರವಾಸಿಗರು, ಜನಸಾಮಾನ್ಯರು ಹಾಗೂ ಸ್ಥಳೀಯರಿಗೆ ಮೃಗಾಲಯವನ್ನು ವೀಕ್ಷಿಸಲು ಅನುವಾಗುವಂತೆ, ಅಕ್ಟೋಬರ್ 17 ಮತ್ತು ಅಕ್ಟೋಬರ್ 24ರ ಮಂಗಳವಾರಗಳಂದು ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆದಿರಲಾಗುವುದು. ಮುಂದುವರೆದು ಅಕ್ಟೋಬರ್ 15ರಿಂದ ಅಕ್ಟೋಬರ್ 29ರ ವರೆಗೆ ವಿದ್ಯಾರ್ಥಿಗಳ ರಿಯಾಯಿತಿಯನ್ನು ರದ್ದುಗೊಳಿಸಲಾಗಿದೆ.

ಮೃಗಾಲಯಕ್ಕೆ ಭೇಟಿ ನೀಡುವ ಸಮಸ್ತ ವೀಕ್ಷಕರುಗಳು ಸುಗಮವಾದ ಪ್ರವೇಶ ಪಡೆಯಲು ಅಂಡರ್ ಪಾಸ್ ಮೂಲಕವೇ ಮೃಗಾಲಯಕ್ಕೆ ಪ್ರವೇಶಿಸುವಂತೆ ವಿನಂತಿಸಲಾಗಿದೆ ಹಾಗೂ ವಿಶೇಷ ಚೇತನರು ವೀಕ್ಷಕರು ಮುಖ್ಯ ಪ್ರವೇಶದ್ವಾರದ ಪಕ್ಕದಲ್ಲಿರುವ ಸಿಬ್ಬಂದಿ ಪ್ರವೇಶದ್ವಾರದ ಮೂಲಕ ಪ್ರವೇಶ ಪಡೆಯಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ

Exit mobile version