Site icon MOODANA Web Edition

ರಾಜ್ಯದ ಎಲ್ಲಾ ಕೃಷಿ ವಿಶ್ವ್ವವಿದ್ಯಾನಿಲಯಗಳು ಜಾಗತೀಕರಣದಲ್ಲಿ ಮುಂದಿದೆ

ಬೆಂಗಳೂರು, 4ನೇ ಅಕ್ಟೋಬರ್(ಕರ್ನಾಟಕ ವಾರ್ತೆ):

 ರಾಜ್ಯದ ಎಲ್ಲಾ ಕೃಷಿ ವಿಶ್ವಿವಿದ್ಯಾನಿಲಯಗಳು ಜಾಗತೀಕರಣದಲ್ಲಿ ಮುಂಚೂಣಿಯಲ್ಲಿದೆ. ಅತ್ಯಾಧುನಿಕ ತಾಂತ್ರಿಕತೆಯಲ್ಲಿ ಎರಡು ದಶಕಗಳಿಂದ ಅಭಿವೃದ್ಧಿ ಹೊಂದುವಲ್ಲಿ ಮೈಲಿಗಲ್ಲು ಸಾಧಿಸಿದೆ ಎಂದು ವಿಶ್ರಾಂತ ಉಪ ಮಹಾ ನಿರ್ದೇಶಕರು,  ಅಂತರಾಷ್ಟ್ರೀಯ ಅರೆ-ಶುಷ್ಕ ಉಷ್ಣವಲಯ ಬೆಳೆಗÀಳ ಸಂಶೋಧನಾ ಸಂಸ್ಥೆ, ಹೈದರಾಬಾದ್ ಮತ್ತು ಮೈಸೂರಿನ ಜಿ.ಆರ್.ಎಸ್.ವಿ. ಸಲಹಾ ಸೇವೆಗಳ ಸಹ-ಸಂಸ್ಥಾಪಕರಾದ ಸಿ.ಎಲ್. ಲಕ್ಷ್ಮೀಪತಿ ಗೌಡ ಅವರು ತಿಳಿಸಿದರು.

ಇಂದು ಜಿಕೆವಿಕೆ ಆವರಣದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಮಾವೇಶ ಭವನದಲ್ಲಿ 58ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ, ಪ್ರಶಸ್ತಿ ವಿತರಿಸಿ  ಮಾತನಾಡಿದ ಅವರು ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಮತ್ತು ಭಾರತದಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡುತ್ತಿದೆ. ಈ ವಿಶ್ವವಿದ್ಯಾನಿಲಂiÀದ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಕೃಷಿ ಆರ್ ಅಂಡ್ ಡಿ ವಲಯದಲ್ಲಿ ಮಹತ್ವ ಪ್ರಭಾವ ಬೀರಿದ್ದಾರೆ ಎಂದು ತಿಳಿಸಿದರು.

ಬೆಳೆ ತಂತ್ರಜ್ಞಾನಗಳು ಮತ್ತು ಒಣಭೂಮಿ ಬೆಳೆ ಸುಧಾರಣೆ ಶ್ಲಾಘನೀಯವಾಗಿದೆ. ಯುಎಎಸ್‍ಬಿ ವಿಜ್ಞಾನಿಗಳು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ವಿವಿಧ ವಲಯಗಳಲ್ಲಿ ಕೃಷಿಗಾಗಿ ಹಲವು ಹೊಸ ಬೆಳÉ ತಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ತಳಿಗಳ ಸಂಶೋಧನೆಯು ಇನ್ನಷ್ಟು ಆಗಬೇಕು. ಸ್ಫರ್ಧಾತ್ಮಕ ಜಗತ್ತಿನಲ್ಲಿ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವುದರಲ್ಲಿ ಸತತ ಪ್ರಯತ್ನವಿರಬೇಕು ಎಂದರು.

ಅಂತರಾಷ್ಟ್ರೀಯ ಕೃಷಿ ಸಂಶೋಧನಾ ಕೇಂದ್ರವಾದ ಅರೆ-ಶುಷ್ಕ  ಉಷ್ಣವಲಯ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ನನ್ನ 4 ದಶಕಗಳ ವೃತ್ತಿಜೀವನವು ಸಾಗಿತ್ತು. ದೇಶ ವಿದೇಶಗಳಲ್ಲಿ ಮತ್ತು ಕೃಷಿ ಇಲಾಖೆಯ ವಿಸ್ತರಣಾ ಸಿಬ್ಬಂದಿಗಳೊಂದಿಗೆ ಕೆಲಸ ಮಾಡಿದ್ದೇನೆ. 2020 ಕೋವಿಡ್ ಸಾಂಕ್ರಾಮಿಕ ರೋಗದ ನಂತರ ವಿಶ್ವವಿದ್ಯಾನಿಲಗಳೊಂದಿಗಿನ ನನ್ನ ಸಂವಹನಗಳು ಬಹಳ ಸೀಮಿತವಾಗಿವೆ ಎಂದರು.

ವಿದ್ಯಾರ್ಥಿಗಳು ಪದವಿ ಕೋರ್ಸ್‍ಗೆ ಸೇರುವ ಮತ್ತು ವಿಶ್ವವಿದ್ಯಾನಿಲಯದಿಂದ ಪದವಿ ಪಡೆಯುವ ಸಮಯದ ನಡುವೆ ಶೇ. 25 ರಷ್ಟು ಹೊಸ ತಂತ್ರಜ್ಞಾನ ಮತ್ತು ಜ್ಞಾನವು ಉತ್ಪತ್ತಿಯಾಗುತ್ತದೆ. ಶಿಕ್ಷಕರು ಬೋಧನೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದಲ್ಲಿ ಮುಂದುವರೆದು ದೇಶಕ್ಕೆ ಕೀರ್ತಿ ತರಬೇಕು ಎಂದರು.

 ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯು ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಜ್ಞಾನಾರ್ಜನೆಗೆ ಅನುಕೂಲವಾಗಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯವು ಉತ್ತಮವಾಗಿ ನಿರ್ಮಾಣವಾಗಲು ಸಹಾಯವಾಗುತ್ತದೆ ಎಂದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ: ಎಸ್.ವಿ. ಸುರೇಶ, ಅವರು ಮಾತನಾಡಿ, ಸಂಸ್ಥಾಪನಾ ದಿನವನ್ನು ಆಚರಿಸುವುದರಿಂದ ಕೃಷಿ ವಿಶ್ವವಿದ್ಯಾನಿಲಯದ ಏಳಿಗೆಗೆ ಶ್ರಮಿಸಿದವರನ್ನು ಸ್ಮರಿಸಿಕೊಳ್ಳಲು ಸದಾವಕಾಶವಾಗಿದೆ. ಬೀಜ ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳನ್ನು ನಿವಾರಿಸÀಲು ಈ ವರ್ಷದಿಂದ ಕೃಷಿಮೇಳದಲ್ಲಿ ಬೀಜ ಮೇಳವನ್ನು ಆಯೋಜಿಸಲು ರೂಪುರೇಷೆÉಗಳನ್ನು ಸಿದ್ದಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ – ಖಾಸಗಿ ಸಹಬಾಗಿತ್ವದಲ್ಲಿ ಬೀಜ ಉತ್ಪಾದನೆಯ ಬಗ್ಗೆ ಸಂಶೋದÀನೆ ಕೈಗೊಳ್ಳಲು ಕ್ರಮಕೈಗೊಳ್ಳಲಾಗುವುದು. ವಿದೇಶ ವಿಶ್ವವಿದ್ಯಾನಿಲಯಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಏಕಕಾಲದಲ್ಲಿ ಎರಡು ಸ್ನಾತಕ ಪದವಿಗಳನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ.       ಕೃಷಿ ವಿಸ್ತರಣೆ, ಕೃಷಿ ಶಿಕ್ಷಣ ಮತ್ತು ಕೃಷಿ ಸಂಶೋಧನೆಯಲ್ಲಿ ಸಮಗ್ರ ಅಭಿವೃದ್ಧಿಗೆ ಕೃಷಿ ವಿಶ್ವವಿದ್ಯಾನಿಲಯ ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ರೈತರ ಏಳಿಗೆಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ: ಮೂಡಲಗಿರಿಯಪ್ಪ, ಮುಖ್ಯ ವಿಜ್ಞಾನಿಗಳು, ಅಖಿಲ ಭಾರತ ಸುಸಂಘಟಿತ ಖುಷ್ಕಿ ಬೇಸಾಯ ಪ್ರಾಯೋಜನೆ, ಜಿಕೆವಿಕೆ, ಬೆಂಗಳೂರು ರವರಿಗೆ ಡಾ: ಕಾಳಯ್ಯ ಕೃಷ್ಣಮೂರ್ತಿ, ರಾಷ್ಟ್ರೀಯ ಪ್ರಶಸ್ತಿ, ಡಾ. ಸಿ.ಎ. ದೀಪಕ್, ಕಿರಿಯ ಭತ್ತದತಳಿ ವಿಜ್ಞಾನಿಗಳು, ವಲಯ ಕೃಷಿ ಸಂಶೋಧನಾ ಕೇಂದ್ರ, ವಿ.ಸಿ.ಫಾರಂ, ಮಂಡ್ಯ, ರವರಿಗೆ ನಾಗಮ್ಮ ದತ್ತಾತ್ರೇಯ ರಾವ್ ಪ್ರಶಸ್ತಿ, ಡಾ: ಕೆ.ಎನ್. ಶ್ರೀನಿವಾಸಪ್ಪ, ಪ್ರಾಧ್ಯಾಪಕರು (ತೋಟಗಾರಿಕೆ), ಕೃಷಿ ಮಹಾವಿದ್ಯಾಲಯ, ಜಿಕೆವಿಕೆ, ಬೆಂಗಳೂರು ರವರಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ಐ.ಸಿ.ಎ.ಆರ್.) ಉತ್ತಮ ಶಿಕ್ಷಕ ಪ್ರಶಸ್ತ್ತಿ, ಡಾ.ಕೆ.ಶಿವರಾಮು, ತರಬೇತಿ ಸಂಯೋಜಕರು ಮತ್ತು ಮುಖ್ಯಸ್ಥರು, ಸಿಬ್ಬಂದಿ ತರಬೇತಿ ಘಟಕ, ಜಿಕೆವಿಕೆ, ಬೆಂಗಳೂರು ರವರಿಗೆ      ಮೆ|| ಜುವಾರಿ ಇಂಡಸ್ಟ್ರೀಸ್ ಲಿಮಿಟೆಡ್ ಅತ್ಯುತ್ತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ, ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿ ಮತ್ತು ಕೃಷ್ಣಮೂರ್ತಿ ಬಿಳಿಗೆರೆ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆರವರಿಗೆ ಕನ್ನಡ ಕೃಷಿ ಪುಸ್ತಕ ಪ್ರಶಸ್ತಿಗಳನ್ನು ನೀಡಲಾಯಿತು. ರಮೇಶ್‍ಕುಮಾರ್.ಎಂ.ಟಿ.,ಅಧೀಕ್ಷಕರು (ಆಡಳಿತ), ರೇಷ್ಮೆ ಕೃಷಿ ಮಹಾವಿದ್ಯಾಲಯ, ಚಿಂತಾಮಣಿ, ಎಲ್. ಮಂಜುನಾಥ್, ಹಿರಿಯಕ್ಷೇತ್ರ ಸಹಾಯಕರು, ವಲಯ ಕೃಷಿ ಸಂಶೋಧನಾ ಕೇಂದ್ರ, ವಿ.ಸಿ.ಫಾರಂ, ಮಂಡ್ಯ, ವೈ.ಮುನಿಕೃಷ್ಣ, ಪರಿಚಾರಕರು, ಕೃಷಿ ತಂತ್ರಜ್ಞಾನ ಮಾಹಿತಿಕೇಂದ್ರ, ಜಿಕೆವಿಕೆ, ಬೆಂಗಳೂರು, ಶ್ರೀಮತಿ. ಮಾನಸ, ಎನ್.,ತಾಂತ್ರಿಕ ಅಧಿಕಾರಿ, ವಲಯ ಕೃಷಿ ಸಂಶೋಧನಾ ಕೇಂದ್ರ, ಜಿಕೆವಿಕೆ, ಬೆಂಗಳೂರು, ಇದೇ ಮೊದಲ ಬಾರಿಗೆ ಚುಂಚನಹಳ್ಳಿ ಮಹದೇವ, ಹಿರಿಯ ಕೃಷಿ ಕಾರ್ಮಿಕರು, ಸಾವಯವ ಕೃಷಿ ಸಂಶೋಧನಾ ಕೇಂದ್ರ, ನಾಗನಹಳ್ಳಿ, ಮೈಸೂರು ಹಾಗೂ ಶ್ರೀಮತಿ. ಶಶಿ, ದಿನಗೂಲಿ ನೌಕರಳು (ಮಸ್ಟರ್‍ರೋಲ್), ಸಾವಯವ ಕೃಷಿ ಸಂಶೋಧನಾ ಕೇಂದ್ರ, ನಾಗನಹಳ್ಳಿ, ಮೈಸೂರುರವರಿಗೆ ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿ,. ಚಿದಾನಂದಗೌಡ,ಎಂ.ಆರ್., ಕೃಷಿ ಮಹಾವಿದ್ಯಾಲಯ, ಚಾಮರಾಜನಗರಕು. ಪೂರ್ವಿಕ, ಆರ್.ಗೌಡ, ಕೃಷಿ ಮಹಾವಿದ್ಯಾಲಯ, ಹಾಸನರವರಿಗೆ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯವಸ್ಥಾಪನಾ ಮಂಡಳಿಯ ಸದಸ್ಯರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Exit mobile version