Site icon MOODANA Web Edition

ವಿದ್ಯಾರ್ಥಿ ವೇತನ ವಿಷಯವಾಗಿ ಅನಾಮಧೇಯ ಕರೆಗಳಿಗೆ ಕಿವಿಗೊಡದಿರಲು ಸೂಚನೆ

ಬೆಂಗಳೂರು, ಅಕ್ಟೋಬರ್ 03 (ಕರ್ನಾಟಕ ವಾರ್ತೆ) :


ಶಾಲಾ ಶಿಕ್ಷಣ ಇಲಾಖೆಯ M.H.R.D- Central Sector Scheme of Scholarship for Colleges and University Students ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಯಾವುದೇ ಹಣದ ವ್ಯವಹಾರದ ಮೂಲಕ ವ್ಯವಹರಿಸುವುದಿಲ್ಲ. ಈ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು ಪ್ರಾಮಾಣಿಕವಾಗಿ ಸರ್ಕಾರದ ಆದೇಶದನ್ವಯ ಯಥಾವತ್ತಾಗಿ ನಡೆಯುತ್ತಿವೆ ಎಂದು ಪದವಿ ಪೂರ್ವ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

ಇತ್ತೀಚೆಗೆ ವಿವಿಧ ಇಲಾಖೆಗಳಲ್ಲಿ ಈ ಹಿಂದಿನ ಸಾಲುಗಳಲ್ಲಿ ವಿದ್ಯಾರ್ಥಿವೇತನ ಫಲಾನುಭವಿಗಳ ಮಾಹಿತಿಯನ್ನು ಅನ್ಯ ಮಾರ್ಗದಲ್ಲಿ/ಅನಧಿಕೃತವಾಗಿ ಕ್ರೂಡೀಕರಿಸಿಕೊಂಡಿರುವ ಕೆಲವು ಅನಾಮಧೇಯರು, ನಕಲಿ e-mail ID ಸೃಷ್ಟಿಸಿ, ಆ ಮೂಲಕ ಆಯ್ದ ವಿದ್ಯಾರ್ಥಿಗಳಿಗೆ ಅವರ ಮಾಹಿತಿ ಕಳುಹಿಸಿ, ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿ, ಸುಳ್ಳು ಆಶ್ವಾಸನೆ ನೀಡಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಇಲಾಖೆಗೆ ದೂರುಗಳು ಬಂದಿರುತ್ತವೆ. ಅಂತಹ ಅನಾಮಧೇಯ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯಿಂದ ಸೈಬರ್ ಪೊಲೀಸರಿಗೆ ದೂರುಗಳನ್ನು ರವಾನಿಸಲಾಗಿದೆ.
 
ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಯಾವುದೇ ಅನ್ಯ ಮಾರ್ಗಗಳಿಂದ ಹಣ ವಸೂಲಿ ಮಾಡುವುದಾಗಲೀ, ಮಾಹಿತಿ ಕೇಳುವ/ಕೊಡುವ ನೆಪದಲ್ಲಾಗಲೀ ವಿದ್ಯಾರ್ಥಿವೇತನ ಇಲಾಖೆಯ ಹೆಸರು ಹೇಳಿಕೊಂಡು ಯಾರಾದರೂ ಸಂಪರ್ಕಿಸಿದಲ್ಲಿ ವಿದ್ಯಾರ್ಥಿಗಳು ಅಥವಾ ಪೋಷಕರುಗಳು ಅಂತಹವುಗಳನ್ನು ನಂಬಿ, ಪ್ರೋತ್ಸಾಹಿಸಿ ಮೋಸಕ್ಕೊಳಗಾಗಬಾರದೆಂದು ಈ ಮೂಲಕ ತಿಳಿಸಲಾಗಿದೆ. ಒಂದು ವೇಳೆ ಇಂತಹ ಅನಾಮಧೇಯರಿಂದ ವಿದ್ಯಾರ್ಥಿಗಳು ಅಥವಾ ಪೋಷಕರು ಮೋಸ ಹೋದಲ್ಲಿ ಅದಕ್ಕೆ ತಾವುಗಳೇ ಕಾರಣರಾಗಿರುತ್ತೀರಿ ವಿನಃ ಇಲಾಖೆಯು ಯಾವುದೇ ರೀತಿಯಿಂದಲೂ ಜವಾಬ್ದಾರರಾಗಿರುವುದಿಲ್ಲ ಎಂಬ ಅಂಶವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ ತರಲಾಗಿದೆ ಎಂದು ಪದವಿ ಪೂರ್ವ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version