24.2 C
Karnataka
Saturday, March 21, 2026
spot_img

ಮಾದರಿ ಗ್ರಾಮೀಣ ಮಟ್ಟದ ಸರ್ಕಾರಿ ಶಾಲೆಗಳ ನಿರ್ಮಾಣ – ಕೆ.ಹೆಚ್ ಮುನಿಯಪ್ಪ

ಬೆಂಗಳೂರು, ಸೆಪ್ಟೆಂಬರ್ 30 (ಕರ್ನಾಟಕ ವಾರ್ತೆ) :

ಮಹಾತ್ಮ ಗಾಂಧೀಜಿಯವರ ಜನ್ಮದಿನ ಪ್ರಯುಕ್ತ ದೇವನಹಳ್ಳಿಯ ವಿಶ್ವನಾಥಪುರದಲ್ಲಿ ಮಾದರಿ ಶಾಲೆಯನ್ನು ನಿರ್ಮಾಣ ಮಾಡಲಾಗುವುದು ಎಮದು ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳ ಶಾಲೆಗಳು ನಗರ ಮಟ್ಟದ ಶಾಲೆಗಳಿಗೆ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎಂದು ಹಾಗೂ ನಗರ ಪ್ರದೇಶದ ಶಾಲೆಗಳ ಮಕ್ಕಳ ರೀತಿಯಲ್ಲಿ ಬೆಳವಣಿಗೆಯಾಗಬೇಕು.ಸಿಎಸ್‍ಆರ್ ಕಂಪನಿಗಳ ಕಾಯಿದೆ, 2013 (“ಆಕ್ಟ್”) ಸೆಕ್ಷನ್ 135 ರಂತೆ  ಕಂಪನಿಗಳು ಕಡ್ಡಾಯವಾಗಿ ಸಿಎಸ್‍ಆರ್ ಚಟುವಟಿಕೆಗಳಿಗೆ ನಿರ್ದಿಷ್ಟ ಮೊತ್ತವನ್ನು ನೀಡಬೇಕು. ಈ ಅನುದಾನದಡಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿಗಳು, ಕಲಿಕಾ ಸಾಮಗ್ರಿಗಳು, ಪ್ರಯೋಗಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ, ಡಿಜಿಟಲ್ ಗ್ರಂಥಾಲಯಗಳು, ಶಾಲೆಯ ಕಾಂಪೌಂಡ್ ನಿರ್ಮಾಣ, ಮಕ್ಕಳಿಗೆ ಪೌಷ್ಠಿಕ ಆಹಾರ ಪದಾರ್ಥಗಳನ್ನು ನೀಡುವುದು, ಕ್ರೀಡಾ ಸಾಮಗ್ರಿಗಳ ವ್ಯವಸ್ಥೆ, ಉತ್ತಮವಾದ ತರಬೇತಿ ಪಡೆದಿರುವ ಶಿಕ್ಷಕರ ನೇಮಿಸುವುದು ಒಳಗೊಂಡಿದೆ ಎಂದರು.

ಪ್ರತಿಷ್ಠಿತ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿ ಅಡಿ ಎಲ್ಲಾ ವ್ಯವಸ್ಥೆಯನ್ನು ಒಳಗೊಂಡ ಮಾದರಿ ಶಾಲೆಗಳ ನಿರ್ಮಾಣಕ್ಕೆ ಸಚಿವ ಮುನಿಯಪ್ಪನವರು ಸುಮಾರು 1 ತಿಂಗಳಿನಿಂದ  ಕಾರ್ಯಕ್ರಮ ರೂಪಿಸಿದ್ದು ಈಗಾಗಲೇ ಪ್ರತಿಷ್ಠಿತ 15 ಕ್ಕೂ ಹೆಚ್ಚು  ಕಂಪನಿಗಳ ಮುಖ್ಯಸ್ಥರು ಹಾಗೂ  ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಯನ್ನು ನಡೆಸಿದ್ದು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ

ಕೆಲವು ಪ್ರಮುಖ ಕಂಪನಿಗಳ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಾಲೆಗಳ ಕಾಮಗಾರಿಗಳನ್ನು ನಡೆಸಲು ಮುಂದಾಗಿದ್ದು ಗಾಂಧೀಜಿಯವರ ಕನಸಿನಂತೆ ಮಾದರಿ ಶಾಲೆಗಳ ನಿರ್ಮಾಣ ಮಾಡಲು ಸಿದ್ದತೆ ನಡೆಸಿದ್ದಾರೆ.

  ದೇವನಹಳ್ಳಿ ತಾಲ್ಲೂಕಿನ ಎಲ್ಲಾ ಗ್ರಾಮಪಂಚಾಯತಿ ಮಟ್ಟದಲ್ಲಿ ಮಾದರಿ ಶಾಲೆಗಳ ನಿರ್ಮಾಣಕ್ಕೆ ಮುಂದಾಗಿದ್ದು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ನವರು ಸಹ ಈ ಕಾರ್ಯಕ್ರಮಕ್ಕೆ ಬೆಂಬಲವನ್ನು ಸೂಚಿಸಿದ್ದು, ಅವರು ಸಹ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಆಹಾರ ಸಚಿವರಾದ ಕೆಹೆಚ್ ಮುನಿಯಪ್ಪನವರು ಬಡವರ, ರೈತರ ಪರ ಹಾಗೂ ಗ್ರಾಮೀಣ ಮಟ್ಟದ ಮಕ್ಕಳ ಬೆಳವಣಿಗೆಯ ಹಿತ ದೃಷ್ಟಿಯಿಂದ ಈ ಸಂಕಲ್ಪವನ್ನು ತೊಟ್ಟಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಶ್ರಮಿಕರ ಮಕ್ಕಳೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವುದರಿಂದ ಅವರಿಗೆ ಎಲ್ಲಾ ರೀತಿಯ ಅನುಕೂಲಕರ ವಾತಾವರಣದಲ್ಲಿ ಬೆಳೆಸಬೇಕು ಮತ್ತು ನಗರ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳ ಮಕ್ಕಳಿಗೆ ಸಮವಾಗಿ ಅವರನ್ನು ತಯಾರು ಮಾಡಬೇಕು ಹಾಗೂ ನಮ್ಮೂರ ಶಾಲೆ ಮಾದರಿ ಶಾಲೆ ಎಂಬ ಸಂದೇಶ ಇಡೀ ರಾಜ್ಯದಾದ್ಯಂತ ಮುಂದುವರಿದರೆ ಪ್ರತಿಷ್ಠಿತ ಖಾಸಗಿ ಶಾಲೆಗಳ ಜೊತೆಗೆ ಗ್ರಾಮೀಣ ಮಟ್ಟದ ಶಾಲೆಗಳು  ಬೆಳೆದಂತಾಗುತ್ತದೆ ಮತ್ತು ಪೆÇೀಷಕ ಆರ್ಥಿಕವಾಗಿ ಸಹಕಾರಿಯಾಗಲು ಸಾಧ್ಯವಾಗುತ್ತದೆ. ಈ ಒಂದು ಸಂಕಲ್ಪವನ್ನು ಸಚಿವರು ಬಯಸಿದ್ದು ನಿಜಕ್ಕೂ ಶ್ಲಾಘನೀಯವಾದದ್ದು, ಇದನ್ನು ಗಾಂಧೀಜಿಯವರ ಜನ್ಮದಿನ ದಂದೆ ಕಾರ್ಯ ರೂಪಕ್ಕೆ ತರಲು  ಮಾನ್ಯ ಸಚಿವರು ಉತ್ಸುಕರಾಗಿದ್ದಾರೆ.

ಎದೆಯ ಹಣತೆಯಲ್ಲಿ ಅಕ್ಷದ ದೀಪ ಹೊತ್ತಿಸಿ ಅಗಣಿತ ಮಂದಿಯ ಬಾಳಿಗೆ ಭವ್ಯ ಬೆಳಕು ನೀಡಿದ  ಶಿಕ್ಷಣತಜ್ಞರು  ಮಾದರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಕಲಿಕೆಯನ್ನು ನೀಡಬೇಕೆಂಬ ಬಯಕೆ ಅಂದಿನ ಮಾಜಿ ರಾಷ್ಟ್ರಪತಿ ಗಳಾದ ಸರ್ವೇಪಲ್ಲಿ ರಾಧಾಕೃಷ್ಣನ್ ರವರ ಕನಸಾಗಿತ್ತು ಇದನ್ನು ಮಕ್ಕಳಲ್ಲಿ  ಮೂಡಿಸಿಬೇಕಾರೆ ಒಂದು ಸುಸಜ್ಜಿತ ವಾತಾವರಣ ಬಹು ಮುಖ್ಯವಾಗಿರುತ್ತದೆ  

ಸರ್ವಪಲ್ಲಿ ರಾಧಾಕೃಷ್ಣನ್‍ರವರ ಹೇಳಿದಂತೆ “ಶಿಕ್ಷಣದ ಅಂತಿಮ ಫಲಿತಾಂಶವು ಸ್ವತಂತ್ರ ಹಾಗೂ ಸೃಜನಶೀಲ ಮನುಷ್ಯನನ್ನು ರೂಪಿಸುವುದಾಗಬೇಕು. ಆಗ ಮಾತ್ರ ಅವರು ಕಹಿ ಸಂದರ್ಭ ಮತ್ತು ಪ್ರಕೃತಿಯ ಪ್ರತಿಕೂಲತೆಗಳ ವಿರುದ್ಧ ಹೋರಾಡಬಹುದು. ಶಾಲೆಗಳಲ್ಲಿ  ವಿದ್ಯೆ ಕಲಿಸಿದವರು ಮಾತ್ರ ಶಿಕ್ಷಕರಲ್ಲ. ಮಕ್ಕಳ ಸರಿ ತಪ್ಪುಗಳನ್ನು ಗುರುತಿಸಿ ಕಲಿಸುವವರು ಶಿಕ್ಷಕರೆ. ನಮ್ಮ ಶಾಲೆ ಮಾದರಿ ಶಾಲೆ, ನಮ್ಮ ಗ್ರಾಮ ಮಾದರಿ ಗ್ರಾಮವಾಗಬೇಕು ಎಂಬ ಬಯಕೆ ಮಕ್ಕಳಲ್ಲಿ ಮೂಡಬೇಕು ಎಂಬುವುದು ಸಚಿವರ ಆಶಯವಾಗಿದೆ.

ಪ್ರತಿಷ್ಠಿತ ಕಂಪನಿಗಳ ಜೊತೆ ಒಂದಾಗಿ ದೇವನಹಳ್ಳಿಯ ಸರ್ವತೋಮುಖ ಬೆಳವಣಿಗೆಗಾಗಿ ಶಾಲೆಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಮಹಾತ್ಮ ಗಾಂಧೀಜಿಯವರು ಜನ್ಮ ದಿನಾಚರಣೆಯ ಶುಭ ಸಂದರ್ಭದಲ್ಲಿ ಮಾದರಿ ಶಾಲೆ ಎಂಬ ಯೋಜನೆಯನ್ನು ಶಾಲಾ ಶಿಕ್ಷಣ ಸಚಿವರ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ. ಹೆಚ್ ಮುನಿಯಪ್ಪನವರು ಉದ್ಘಾಟಿಸಲಿದ್ದಾರೆ.

ಗಾಂಧೀಜಿಯವರು ಹೇಳಿದಂತೆ ನಮಗಾಗಿ ನಾವು ಏನು ಮಾಡುತ್ತೇವೆ ಎಂಬುವುದು ಕೊನೆಗೊಳ್ಳುತ್ತದೆ ಇತರರಿಗೆ ಏನು ಮಾಡುತ್ತೇವೆ ಎಂಬುವುದು ಶಾಶ್ವತವಾಗಿರುತ್ತದೆ.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!