ಬೆಂಗಳೂರು, ಸೆಪ್ಟೆಂಬರ್ 30 (ಕರ್ನಾಟಕ ವಾರ್ತೆ) :
ಅಂಚೆ ಇಲಾಖೆಯು ಪೋಸ್ಟ್ ಕಾರ್ಡ್‍ಗಳಲ್ಲಿ ಕಲೆಯ ಪ್ರದರ್ಶನವನ್ನು ಅಕ್ಟೋಬರ್ 1 ರಿಂದ 16 ರವರೆಗೆ ಸಂದೇಶ್ ಮ್ಯೂಸಿಯಂ ಆಫ್ ಕಮ್ಯುನಿಕೇಶನ್, ಮ್ಯೂಸಿಯಂ ರೋಡ್ ಪೆÇೀಸ್ಟ್ ಆಫೀಸ್ ಕಾಂಪೌಂಡ್‍ನಲ್ಲಿ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮ ಪೆÇೀಸ್ಟ್ ಕಾರ್ಡ್ ಕಲಾ ಪ್ರದರ್ಶನ “ಪಿನ್ಕೋಡ್” ನಿಂದ ಪ್ರೇರಿತವಾಗಿದೆ. 10 ಕಲಾವಿದರಿಂದ ಪೆÇೀಸ್ಟ್ ಕಾರ್ಡ್ ಕಲೆ ಪ್ರದರ್ಶಿಸಲಾಗುವುದು. ಈ ಅವಧಿಯಲ್ಲಿ ಸಂದರ್ಶಕರಿಗೆ ಲೈವ್ ಚಟುವಟಿಕೆ ಇರುತ್ತದೆ. ಸಂದರ್ಶಕರು ತಮ್ಮದೇ ಆದ ಪೆÇೀಸ್ಟ್ ಕಾರ್ಡ್ ಕಲೆಯನ್ನು ರಚಿಸಬಹುದು ಮತ್ತು ಅದನ್ನು ತಮ್ಮೊಂದಿಗೆ ಕೊಂಡೊಯ್ಯಬಹುದು ಅಥವಾ ಅವರ ಹತ್ತಿರದ ಮತ್ತು ಆತ್ಮೀಯರಿಗೆ ಕಳುಹಿಸಬಹುದು ಅಥವಾ ಪೆÇೀಸ್ಟ್ ಕಾರ್ಡ್ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಅಕ್ಟೋಬರ್ 1 ರ ವಿಶ್ವ ಪೋಸ್ಟ್‍ಕಾರ್ಡ್ ದಿನದಂದು ವಿಶೇಷ ರದ್ದತಿಯೊಂದಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಬಿಂಬಿಸುವ 16 ಚಿತ್ರ ಪೆÇೀಸ್ಟ್ ಕಾರ್ಡ್‍ಗಳನ್ನು ಬೆಂಗಳೂರು ಜಿಪಿಒ ಮೇಘದೂತ್ ಆಡಿಟೋರಿಯಂನಲ್ಲಿ ಪೆÇೀಸ್ಟ್ ಕ್ರಾಸರ್ಸ್ ಸೊಸೈಟಿಯ ಸಹಯೋಗದೊಂದಿಗೆ ಬೆಳಿಗ್ಗೆ 11.30 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ.
ಸ್ವಚ್ಛತಾ ಹಿ ಸೇವೆಯ ಅಂಗವಾಗಿ, ಅಂಚೆ ಇಲಾಖೆಯು ರಾಷ್ಟ್ರವ್ಯಾಪಿ ‘ಜನ್ ಭಾಗಿದರಿ’ ಕಾರ್ಯಕ್ರಮವನ್ನು 1 ಅಕ್ಟೋಬರ್, 2023 ರಂದು 10 ಗಂಟೆಗೆ “ಏಕ್ ತಾರೀಕ್, ಏಕ್ ಘಂಟಾ” ಎಂಬ ವಿಷಯದೊಂದಿಗೆ ಆಯೋಜಿಸಿದೆ. ಕನಿಷ್ಠ ಒಂದು ಗಂಟೆ ಶ್ರಮದಾನ. ಕರ್ನಾಟಕ ವೃತ್ತದಾದ್ಯಂತ ಅಂಚೆ ಕಚೇರಿಗಳು ಸಾರ್ವಜನಿಕ ಸ್ಥಳಗಳು ಮತ್ತು ಅಂಚೆ ಕಚೇರಿಗಳ ಸುತ್ತಮುತ್ತಲೂ ಈ ಕಾರ್ಯಕ್ರಮದಲ್ಲಿ ನಡೆಯಲಿದೆ.
ಅಕ್ಟೋಬರ್ 2 ರಂದು ಕರ್ನಾಟಕ ವೃತ್ತದಲ್ಲಿರುವ ಎಲ್ಲಾ ಅಂಚೆ ಇಲಾಖೆಯ ಸೈಟ್‍ಗಳಲ್ಲಿ ಬೆಳಿಗ್ಗೆ 11 ಗಂಟೆಗೆ ಸಂಘಟಿತ ಮರ ನೆಡುವ ಅಭಿಯಾನವಿರುತ್ತದೆ. ಇದು ಸಮುದಾಯ ಸೇವೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಅಂಚೆ ಇಲಾಖೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮುಖ್ಯ ಪೆÇೀಸ್ಟ್ ಮಾಸ್ಟರ್ ಜನರಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.